* * * *

ಶನಿವಾರ, ಮೇ 16, 2020

ಅಂತರ್ಜಾಲ ಆಧಾರಿತ ರಾಜ್ಯ ಮಟ್ಟದ ಮಕ್ಕಳ ಕಥೆ ರಚನೆ & ವಾಚನ ಸ್ಪರ್ಧೆ*

👇🏻ಪ್ರಕಟಣೆ👇🏻
~~~~~~~~~
 *ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ), ಬೆಂಗಳೂರು* & *ಕೊಡಗು ಜಿಲ್ಲಾ ಘಟಕದ ಪ್ರಾಯೋಜಕತ್ವದಲ್ಲಿ  ಅಂತರ್ಜಾಲ ಆಧಾರಿತ ರಾಜ್ಯ ಮಟ್ಟದ ಮಕ್ಕಳ ಕಥೆ ರಚನೆ & ವಾಚನ ಸ್ಪರ್ಧೆ*

【ದಿನಾಂಕ: ೨೩/೦೫/೨೦೨೦ ಮತ್ತು ೨೪/೦೫/೨೦೨೦  ರಾತ್ರಿ ೦೮ ರಿಂದ ೧೦ ವರೆಗೆ】

 *ನಿಯಮಗಳು/ಸೂಚನೆಗಳು*
~~~~~~~~~~~~~~~
 *೦೧* .  ಮಕ್ಕಳ ಕಥೆ *೨೫೦* ರಿಂದ *೩೦೦* ಪದಗಳ ಮಿತಿಯಲ್ಲಿಯೇ ಇರಬೇಕು.

 *೦೨* . ಒಬ್ಬರು ಒಂದೇ ಮಕ್ಕಳ ಕಥೆ ಮಾತ್ರ ಕಳಿಸಬೇಕು & ವಾಚಿಸಬೇಕು.

 *೦೩* .ಮಕ್ಕಳ ಕಥೆಯು ಸ್ವಂತ ರಚನೆಯದ್ದಾಗಿರಬೇಕು.

 *೦೪* . ಮಕ್ಕಳ ಕಥೆಯನ್ನು ಕಡ್ಡಾಯವಾಗಿ ಅಕ್ಷರ ದೋಷ ಇಲ್ಲದಂತೆ ಮುದ್ರಿಸಿಯೇ ಕಳಿಸಬೇಕು.

 *೦೫* . ಫೋಟೋ ರೂಪದ ಅಥವಾ ಕಾಗದದಲ್ಲಿ ಬರೆದು
        ಕಳಿಸುವ ಮಕ್ಕಳ ಕಥೆಯನ್ನು ಪರಿಗಣಿಸುವುದಿಲ್ಲ.

 *೦೬* . ಮಕ್ಕಳ ಕಥೆಯನ್ನು ವಾಚಿಸಿದ ಧ್ವನಿಸುರುಳಿಯನ್ನು (ಆಡಿಯೋ) ಮತ್ತು
        ‌ಸ್ವಪರಿಚಯದ ೩೦ ಸೆಕೆಂಡ್ ಗಳ ವಿಡಿಯೋವನ್ನು ಮುಂದಿನ ಸಂಖ್ಯೆಗಳಿಗೆ
        ದಿ/೧೫ ರ ಶುಕ್ರವಾರದ ಸಂಜೆ ೦೫ ಗಂಟೆಯ ಒಳಗೆ ತಲುಪಿಸಬೇಕು.

 *೦೭* . ಪ್ರಥಮ, ದ್ವಿತೀಯ ಮತ್ತು
 ತೃತೀಯ ಸ್ಥಾನವನ್ನು ಪಡೆದ ಮಕ್ಕಳ ಕಥೆಗಳಿಗೆ
        ರೂ.೫೦೧, ರೂ.೪೦೧ & ರೂ.೩೦೧ ನಗದು ಬಹುಮಾನವನ್ನು
        ಆನ್ಲೈನ್ ಮೂಲಕ ನೀಡಲಾಗುವುದು.

 *೦೮* . ತೀರ್ಪುಗಾರರು ನೀಡಿದ ೧೦ ಸಮಾಧಾನಕರ ಮಕ್ಕಳ ಕಥೆಗಳಿಗೆ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಹಾಗೂ ಮೆಚ್ಚುಗೆ ಪಡೆದ ೧೦ ಉತ್ತಮ ಮಕ್ಕಳ ಕಥೆಗಳಿಗೆ ಪ್ರಮಾಣ ಪತ್ರಗಳನ್ನು ವೇದಿಕೆಯ ಕಾರ್ಯಕ್ರಮದಲ್ಲಿ ನೀಡಲಾಗುವುದು.

 *೦೯* . ನಿಯಮಗಳಿಗೆ ಒಳಪಡದ ಮಕ್ಕಳ ಕಥೆಗಳನ್ನು ಬಹುಮಾನಕ್ಕೆ ಕಡ್ಡಾಯವಾಗಿ ಪರಿಗಣಿಸುವುದಿಲ್ಲ.

 *೧೦* . ಪ್ರಕಟಣೆಯ ನಂತರ ಹೆಸರನ್ನು ನೋಂದಾಯಿಸುವ ಪ್ರಕ್ರಿಯೆ ಆರಂಭವಾಗುತ್ತದೆ.

 *೧೧* . ಮೊದಲು ನೋಂದಾಯಿಸಿಕೊಂಡ ೭೫ ಕವಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು.

 *೧೨* . ಭಾಗವಹಿಸುವ ಕವಿಗಳ ಮಕ್ಕಳ ಕಥೆಗಳನ್ನು ವೇದಿಕೆಯು ಪ್ರಕಟಿಸುವ ಸಂಕಲನದಲ್ಲಿ ಬಳಸಿಕೊಳ್ಳಲಾಗುವುದು.

 *೧೩* . ತೀರ್ಪುಗಾರರ ನಿರ್ಣಯವೇ ಅಂತಿಮವಾದುದು.

 *೧೪* . ಮಕ್ಕಳ ಕಥೆಗಳು ಟೈಪ್ ಮಾಡಿದ ಮುದ್ರಿತ ರೂಪ,(ಪಿಡಿಎಫ್ ಅಥವಾ ಫೋಟೋ ಕಥೆಗಳನ್ನು ಪರಿಗಣಿಸಲಾಗುವುದಿಲ್ಲ)  ವಾಚನದ ಆಡಿಯೋ ಮತ್ತು ಸ್ವಪರಿಚಯದ ವಿಡಿಯೋಗಳನ್ನು *ಕಳಿಸಬೇಕಾದ ಸಂಖ್ಯೆಗಳು..*

೧). ೯೧೪೧೩೯೫೪೨೬ *ಗಿರೀಶ್ ಕಿಗ್ಗಾಲು,* ಮಡಿಕೇರಿ ತಾಲ್ಲೂಕು ಗೌರವಾಧ್ಯಕ್ಷರು)

೨). ೭೨೦೪೪೩೨೨೧೨ ( *ಚಂಗಚಂಡ ರಶ್ಮಿ ನಿತಿನ್* ಕಾರ್ಯದರ್ಶಿ ಕೊಡಗು ಜಿಲ್ಲೆ )

೩).  ೯೬೩೨೬೧೫೬೧೩( *ಹರೀಶ್ ಕಿಗ್ಗಾಲು* ,ಖಜಾಂಚಿಗಳು ಕೊಡಗು ಜಿಲ್ಲೆ) .

೪).  ೯೯೦೦೫೯೫೭೬೧( *ಸುದರ್ಶನ್ ಕುಸುಬೂರು*  ಗೌರವ ಕಾರ್ಯದರ್ಶಿ ಕೊಡಗು ಜಿಲ್ಲೆ).

೫). ೯೪೮೧೮೮೩೧೯೪ ( *ಪಿ ಎಸ್‌ ವೈಲೇಶ ಕೊಡಗು* ಕೊಡಗು ಜಿಲ್ಲಾಧ್ಯಕ್ಷರು).

 ೬). ೯೪೪೯೩೧೧೨೯೮
 ( *ವಾಸು ಸಮುದ್ರವಳ್ಳಿ,* ರಾಜ್ಯ ಸಂಚಾಲಕರು),

 ೭). ೯೭೩೯೮೭೮೧೯೭ ( *ಕೊಟ್ರೇಶ್ ಎಸ್. ಉಪ್ಪಾರ್,* ರಾಜ್ಯಾಧ್ಯಕ್ಷರು)

              ವಿಶ್ವಾಸದೊಂದಿಗೆ,
 *ಅಧ್ಯಕ್ಷರು & ಕಾರ್ಯದರ್ಶಿಗಳು ಹಾಗೂ ಸರ್ವ   ಪದಾಧಿಕಾರಿಗಳು* ,
ಕೇಂ.ಕ.ಸಾ.ವೇ. ಕೊಡಗು ಜಿಲ್ಲೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ