* * * *

ಶುಕ್ರವಾರ, ಮೇ 15, 2020

ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಮಟ್ಟದ ಕಥನ ಕವನ ಸ್ಪರ್ಧೆಯ ಹಿರಿಯರ ವಿಭಾಗದ *ಮಕ್ಕಳ ಕಥನ ಕವನಗಳ ಸ್ಪಧೆಯ ಫಲಿತಾಂಶ

*ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಮಟ್ಟದ ಕಥನ ಕವನ ಸ್ಪರ್ಧೆಯ ಹಿರಿಯರ ವಿಭಾಗದ *ಮಕ್ಕಳ  ಕಥನ ಕವನಗಳ ಸ್ಪಧೆಯ  ಫಲಿತಾಂಶದ* ವಿವರಗಳು

🥇🥇 *ಪ್ರಥಮ*  1."ವಿಸ್ಮಯದೂರು"  ----ಅಶೋಕ ವಿ ಬಳ್ಳಾ

🥈🥈 *ದ್ವಿತಿಯ* : 2" ವಲಸೆ ಬಂದ ಹಕ್ಕಿ" --- ಸೋಮಲಿಂಗ ಬೇಡರ

🥉🥉 *ತೃತಿಯ* : 3. "ಕಳ್ಳರು ಮತ್ತು ತೆನಾಲಿರಾಮ"---- ಬಾಪು ಗ ಖಾಡೆ.

*ಸಮಾಧಾನಕರ*🏅🏅:
1 " ಮರಿಚೇಳಪ್ಪನ ಮದುವೆ" --- ಅರುಣಾ ನರೇಂದ್ರ

2. "ಕಾಡಲಿ ನಡೆಯಿತು ದಸರ!" --- ಪ್ರಕಾಶ ಮನ್ನಂಗಿ.

3." ಗೊಂಬೆ ತಂದ ಭಾಗ್ಯ"--- ಪ್ರೇಮಾ ಶಿವಾನಂದ


*ರಾಜ್ಯಮಟ್ಟದ ಕಥನ ಕವನ ಸ್ಪರ್ಧೆಯ ತೀರ್ಪುಗಾರರು ಸ್ಪರ್ಧೆಯ ಕುರಿತಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ತಮ್ಮ ಪ್ರೀತಿಯ ಓದಿಗಾಗಿ* 

=> ಕಥನಕವನ ರಚನಾ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಹಿರಿಯ, ಕಿರಿಯ ಸಾಹಿತಿಗಳಿಗೆ ವಂದನೆಗಳು.ಮಕ್ಕಳ ಸಾಹಿತ್ಯದಲ್ಲಿ ಕಥನಕವನ ಪ್ರಾಕಾರದ ಬರಹ ಬಲು ವಿಶಿಷ್ಟವಾದುದು. ಕಾವ್ಯದಲ್ಲಿ ಕಥೆ ಅರಳಿಸುವ ಕಲೆ ಬಲು ಸೊಗಸು. ಸ್ಪರ್ಧೆಗೆ ಬಂದ ಎಲ್ಲಾ ಕಥನಕವನಗಳು ಉತ್ತಮವಾಗಿದ್ದವು. ಅವುಗಳಲ್ಲಿ  ಅತ್ಯುತ್ತವಾದ ಕೆಲವುಗಳನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಹೀಗಾಗಿ ಎಲ್ಲಾ ಕಥನಕವನಗಳು ಮೆಚ್ಚುಗೆಯಾಗಿವೆ. ವಿರಳ ಸಂಖ್ಯೆಯಲ್ಲಿ ಬಂದ ಕಿರಿಯರ ವಿಭಾಗದ ಕಥನಕವನಗಳಲ್ಲಿ ಒಂದೆರಡು ಕವನಗಳಲ್ಲಿ ಪಾಲಕರ ಮಾರ್ಗದರ್ಶನ ತುಸು ಹೆಚ್ಚೆ ಅನ್ನಿಸುವಷ್ಟು ಇತ್ತು. ಮಕ್ಕಳ ಪ್ರತಿಭೆ ಸ್ವಯಂ ಕಸುವಿನಲ್ಲಿ ಬೆಳೆಯಬೇಕು. ಒಂದಿಷ್ಟು ಆಧಾರ ಇರಲಿ ಅಷ್ಟೇ ಎನ್ನುವುದು ನಮ್ಮಕಳಕಳಿ. ಮಕ್ಕಳಿಗೆ ಹೊಸತನದ  ಸಾಹಿತ್ಯದ ಕೃತಿಗಳು ಓದಲು ದಕ್ಕಬೇಕು. ಅಂದಾಗ ಇನ್ನಷ್ಟು ಪಕ್ವಯುತ ಬರಹ ಆಗುತ್ತದೆ. ಅದಕ್ಕೆ ಪಾಲಕರು ಆಸರೆಯಾಗಲಿ. ಹಾಗೆಯೇ ಮಕ್ಕಳ ಒತ್ತಾಯವೂ ಇರಲಿ. ಇನ್ನೂ ಹಿರಿಯರ ವಿಭಾಗದಲ್ಲಿ ನಿರೀಕ್ಷೆ ಮೀರಿ ಕಥನಕವನಗಳು ಬಂದಿದ್ದರಿಂದ ತುಸು ಹೆಚ್ಚೆ ಸಮಯ ಓದಿಗೆ ತೆಗೆದುಕೊಂಡು ಗಮನಹರಿಸಬೇಕಾಯಿತು. ಮಕ್ಕಳ ಸಾಹಿತ್ಯ ವಿಫುಲವಾಗಿ ಬೆಳೆಯುತ್ತಿದೆ. ಅದಕ್ಕೆ ಬಡತನವಿಲ್ಲ ಎಂಬ ಮಾತಿಗೆ ಈ ಪೈಪೋಟಿ ಸೂಕ್ತ ಉದಾಹರಣೆ. ಆದರೆ ಅವುಗಳ ಪೋಷಣೆಗೆ ವೇದಿಕೆಗಳು ಬೇಕು. ಈ ನಿಟ್ಟಿನಲ್ಲಿ ಶಂಕರದೇವರು ಹಿರೇಮಠ ಅವರ ಕಾಳಜಿ ನೆನೆಯಲೇಬೇಕು. ಅವರಿಗೂ ಅಭಿನಂದನೆಗಳು. ಒಂದಿಷ್ಟು ತಾಜಾತನದ ವಿಷಯ ವೈವಿಧ್ಯತೆಯ ಕಥನಕವನಗಳು ಮೂಡಿಬಂದಿವೆ. ತುಂಬಾ ಖುಶಿ. ಬಹುತೇಕರು ಪ್ರಾಣಿ ಪಕ್ಷಿಗಳ ಕಥೆಗಳ ಆಯ್ಕೆಮಾಡಿಕೊಂಡಿದ್ದಾರೆ. ಒಂದಿಷ್ಟು ಹೊಸತನ ಇದ್ದರೆ ಚೆನ್ನ. ಕಥನಕವನಗಳು ಯಾವಾಗಲೂ ಸುಖಾಂತ ಕಾಣಬೇಕು. ದುಃಖಾಂತ ಒಳಿತಲ್ಲ. ಸಾಹಿತ್ಯ ಮಕ್ಕಳಿಗೆ ಖುಶಿ, ರಂಜನೆ, ನೀತಿ, ಜ್ಞಾನ ನೀಡುವಂತಿದ್ದರೆ ಬಲು ಸೊಗಸು. ಈ ನಿಟ್ಟಿನಲ್ಲಿ ಹೊಸ ಕೃತಿಗಳ ಅಧ್ಯಯನ, ತಮ್ಮ ಬರಹಗಳನ್ನು ಇತರ ಬರಹಗಾರೊಂದಿಗೆ ಹೊಲಿಸಿಕೊಳ್ಳುವುದರ ಮೂಲಕವೂ ಒಂದಿಷ್ಟು ನಾವಿನ್ಯತೆಯನ್ನು ಮೂಡಿಸಿಕೊಳ್ಳಬಹುದು. ಎಲ್ಲ ಕಥನಕವನಗಳು ಸುಂದರವಾಗಿ ಮೂಡಿಬಂದಿವೆ.  ಕಥನಕವನದ ವಿಶಿಷ್ಠ ಸ್ವರೂಪಗಳನ್ನು ಅಳವಡಿಸಿಕೊಂಡ ಕೆಲವುಗಳನ್ನು ಪ್ರಶಸ್ತಿಗೆ ಆರಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯ ಈ ಮುಖೇನ ಹಲವಾರು ಬಗೆಯ ಕಥನ ಕವನಗಳನ್ನು ಓದಿ ಆನಂದಿಸುವ ಅವಕಾಶ ಎಲ್ಲರಿಗೂ ಒಟ್ಟಿಗೆ ನಿಲುಕಿದೆ. ಅದೇ ಸಂತಸವನ್ನು ಮತ್ತೊಮ್ಮೆ ನಾವು ಮತ್ತೆ ಮತ್ತೆ ಓದಿ ಅನಂದಿಸಿದ್ದು ಇದೆ. .ಸ್ಪರ್ಧಾಮನೋಭಾವನೆಯಿಂದ ಭಾಗವಹಿಸಿದ ಮತ್ತೊಮ್ಮೆ ನನ್ನೆಲ್ಲಾ ಸಾಹಿತ್ಯ ಮಿತ್ರರನ್ನು ಅಭಿನಂದಸಿಸುತ್ತಾ. ಮಕ್ಕಳ ಸಾಹಿತ್ಯದ ಬೆಳವಣಿಗೆಗಾಗಿ ಇನ್ನಷ್ಟು ಕಾತುರತೆ ಬೆಳೆಸಿಕೊಳ್ಳೋಣ, ವೇದಿಕೆಯನ್ನು ಬಳಸಿಕೊಳ್ಳೋಣ. ಎಲ್ಲರಿಗೂ ಶುಭವಾಗಲಿ.   
              *ಶ್ರೀಪ.ಗು. ಸಿದ್ದಾಪೂರ*.   ಹಾಗೂ  *ವೈ,ಜಿ,ಭಗವತಿ*.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ