ಆತ್ಮಿಯರೆ,
ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ರಾಯಚೂರು ಎಪ್ರಿಲ್ ೨೬ -೨೦೨೦ ರಂದು ಹಮ್ಮಿಕೊಂಡಿದ್ದ ಹಿರಿಯ ಹಾಗೂ ಕಿರಿಯ ವಿಭಾಗದ ಮಕ್ಕಳ ಕಥಾ ರಚನಾ ಸ್ಪರ್ಧೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂಬ ಆಪೇಕ್ಷೆ ಹೊಂದಿದವನಾಗಿದ್ದರೂ ಶಂಕರ್ ದೇವರು ಅವರ ಪ್ರೀತಿಯ ಒತ್ತಾಸೆಯ ಮೇರೆಗೆ ಖೊ ಕೊಟ್ಟ ಡಾ.ಶಶಿಕಾಂತ ಗುರುಗಳ ಆಗ್ರಹದ ಮೇರೆಗೆ ಹಲವು ಕಥೆಗಳನ್ನು ಓದುವುದರ ಮೂಲಕ ನನ್ನ ಬರವಣಿಗೆಯನ್ನು ಸುಧಾರಿಸಿಕೊಳ್ಳಬಹುದೆಂಬ ನಿಟ್ಟಿನಲ್ಲಿ ಒಪ್ಪಿಕೊಂಡೆ, ಜೊತೆಗೆ ಆತ್ಮೀಯರಾದ ಹಿರಿಯ ಮಕ್ಕಳ ಸಾಹಿತಿಗಳಾದ ಡಾ.ನಿಂಗೂ ಸೊಲಗಿಯವರು ಈ ಸ್ಪರ್ಧೆಗೆ ಜೊತೆಯಾದರು.
ಆರಂಭದ ನಿರೀಕ್ಷೆ ಕಥೆಗಳು ಕಡಿಮೆ ಬರಬಹುದೆಂದು. ಆದರೆ ರಾಯಚೂರು ಘಟಕದ ಕ್ರಿಯಾಶೀಲತೆಗೆ ನಾಡಿನ ಎಲ್ಲಡೆಯಿಂದ ಅಲ್ಲದೆ ಹೊರ ರಾಜ್ಯದಿಂದಲೂ ಬಂದ ಕಥೆಗಳೆ ನಿದರ್ಶನ. ಹಿರಿಯರ ವಿಭಾಗದ 58 ಕಥೆಗಳು ಕಿರಿಯರ ವಿಭಾಗದ 21ಕಥೆಗಳು ಕುತೂಹಲ ಮೂಡಿಸಿದವು.
ಸ್ಪರ್ಧೆ ಗಿಂತ ಭಾಗವಹಿಸುವಿಕೆ ಮುಖ್ಯ. ಮಕ್ಕಳ ಸಾಹಿತ್ಯ ರಚನೆ ಹಿನ್ನಡೆ ಅನುಭವಿಸುತ್ತಿರುವ,ಅಲಕ್ಷಕ್ಕೆ ಒಳಗಾಗುತ್ತಿರುವ ಈ ದಿನಗಳಲ್ಲಿ ಇಷ್ಟೆಲ್ಲ ಸಾಹಿತ್ಯದ ಒಡನಾಡಿಗಳು ಭಾಗವಹಿಸಿದ್ದನ್ನು ನೋಡಿದರೆ ಎಲ್ಲರೂ ವಿಜೇತರಾದಂತೆಯೆ. ತೀರ್ಪು ಒಂದು ಔಪಚಾರಿಕ ಪ್ರಕ್ರಿಯೆ ಎಂದು ಭಾವಿಸಿರುವೆ. ಹಲವರು ಇದರಲ್ಲಿ ಮೊದಲ ಪ್ರಯತ್ನ ಮಾಡಿದ್ದಾರೆ, ಕೆಲವರು ಕಥೆಯ ನಿರೂಪಣೆಯಲ್ಲಿ,ವಸ್ತು ಆಯ್ಕೆಯಲ್ಲಿ ,ಶೈಲಿಯಲ್ಲಿ ಹಿಡಿತ ಸಾಧಿಸುವಲ್ಲಿ ಹಿನ್ನಡೆ ಅನುಭವಿಸಿರಬಹುದು ಆದರೆ ಈ ಸ್ಪರ್ಧೆ ಅವರ ಮುಂದಿನ ಬೆಳವಣಿಗೆಗೆ ನೆರವಾಗವುದು ಎಂದು ಭಾವಿಸಿರುವೆ.
ಕಥೆಗಳು ನೀತಿ ಹೇಳಬಾರದು ಈ ವಿಷಯದಲ್ಲಿ ಮಕ್ಕಳ ಸಾಹಿತ್ಯ ಪ್ರವೇಶಿಸುವ ಆರಂಭಿಕರು, ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಜಾಗತಿಕ ಮಕ್ಕಳ ಸಾಹಿತ್ಯದ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ನಾವು ಕನ್ನಡದಲ್ಲಿ ಪ್ರಯೋಗಿಸಬೇಕಿದೆ. ನಮಗೆ ಓದಲು ವಿಫಲವಾಗಿ ಸಿಗುತ್ತಿದ್ದ ಅಮರಚಿತ್ರಕಥೆಗಳು,ಚಂದಮಾಮ ಈಗಿನ ಮಕ್ಕಳಿಗೆ ಸಿಗುತ್ತಿಲ್ಲ. ಮಾಧ್ಯಮದ ಆಕರ್ಷಣೆಗೆ ಸಿಲುಕಿ ಸೊರಗುತ್ತಿರುವ ನಮ್ಮ ಮಕ್ಕಳಿಗೆ ಫ್ಯಾಂಟಸಿ,ವೈಜ್ಞಾನಿಕ, ವಾಸ್ತವ ಕಥೆಗಳನ್ನ ಬರೆಯುವುದರ ಮೂಲಕ ಅವರಲ್ಲಿ ಸಾಹಿತ್ಯದ ರುಚಿ ಹಚ್ಚಬೇಕಿದೆ. ಆಂಗ್ಲಭಾಷಾ ಕಲಿಕೆಯ ಮಕ್ಕಳು ಪಠ್ಯದ ಜೊತೆಗೆ ಆಂಗ್ಲಭಾಷಾ ಮಕ್ಕಳ ಕಥೆ ಹೆಚ್ಚು ಗ್ರಹಿಸುತ್ತಿರುವಂತೆ ನಮ್ಮ ಮಕ್ಕಳು ಯಾವ ಒತ್ತಡವಿಲ್ಲದೆ ಓದುವಂತೆ ಮಾಡಬೇಕಾದರೆ ಮಕ್ಕಳ ಸಾಹಿತ್ಯದಲ್ಲೂ ಪ್ರಯೋಗಕ್ಕಿಳಿಯಬೇಕಾಗಿದೆ. ಆ ಪ್ರಯತ್ನ ನಾವೆಲ್ಲ ಸೇರಿ ಮಾಡೋಣ..
ಡಾ.ನಿಂಗು ಸೊಲಗಿ ಹಾಗೂ ನಾನು ಸೇರಿ ಕಥೆಗಳನ್ನು ಆಯ್ಕೆ ಮಾಡುವಲ್ಲಿ ಸಮಸ್ಯೆ ಎದುರಿಸಿದ್ದಂತು ಖಂಡಿತ. ವೈವಿದ್ಯಮಯ ವಿಷಯ ವಸ್ತು,ಶೈಲಿಯ,ವಿಭಿನ್ನ ಯೋಚನೆಯ ಕಥೆಗಳನ್ನು ಓದಿದ ಸಾರ್ಥಕಭಾವ ನಮ್ಮಲ್ಲಿದೆ. ಆಧುನಿಕ ಮಕ್ಕಳ ಸಾಹಿತ್ಯದ ಬೆಳವಣಿಗೆಯನ್ನಾಧರಿಸಿ ಪ್ರಾಮಾಣಿಕವಾಗಿ ಕಥೆಗಳನ್ನು ಆಯ್ಕೆ ಮಾಡುವ ಪ್ರಯತ್ನ ಮಾಡಿದ್ದೇವೆ...ನಮ್ಮದು ಸಾಧ್ಯತೆ ಇತ್ತು ಕೆಲವರಿಗೆ ಅನಿಸಿರಲೂಬಹುದು.. ಇದೆ ಅಂತಿಮವಲ್ಲ ...ನಮ್ಮ ನಿರ್ಣಯವೆ ಕೊನೆ ಅಲ್ಲ.. ಇದನ್ನು ಮೆಟ್ಟಿಲಾಗಿ ಸ್ವೀಕರಿಸಿ ಮುನ್ನಡೆಯಲು ಯತ್ನಿಸೋಣ.
ಶಂಕರ ದೇವರು ಹಾಗೂ ಅವರ ಬಳಗದಲ್ಲಿ ವಿನಂತಿ ಕೋರಾನಾ ಆಟದ ನಂತರ ಮಕ್ಕಳ ಸಾಹಿತ್ಯದ ಕುರಿತಾದ ಎರಡು ದಿನಗಳ ಕಮ್ಮಟ ನಡೆಸೋಣ.ನಾಡಿನ ಹಿರಿಯರು ನಮ್ಮ ಹಾಗೂ ನಮ್ಮ ಕಾರ್ಯದೊಂದಿಗೆ ಜೊತೆಗೆ ಇದ್ದಾರೆ. ಅವರ ಅನುಭವ ಬಳಸಿಕೊಂಡು ಇನ್ನೂ ಹೊಸತಾಗಿ ಬರೆಯಲು ಯತ್ನಿಸೋಣ.
ಈ ದಿಸೆಯಲ್ಲಿ ಚಿಂತಿಸಿ..
ಕಿರಿಯರ ವಿಭಾಗದ ಸ್ಪರ್ಧೆಯು ಚೆನ್ನಾಗಿತ್ತು..ಮಕ್ಕಳ ವಿಭಿನ್ನ ಅಭಿರುಚಿ ಖುಷಿಕೊಟ್ಟಿತು. ನಮ್ಮ ಮುಂದಿನ ಬರವಣಿಗೆಯಲ್ಲಿ ಅವರನ್ನು ತಲುಪಲು ನಾವು ಬದಲಾಗಬೇಕೆಂಬ ಸೂಚ್ಯವನ್ನು ನೀಡಿದಂತಿತ್ತು.
ಒಟ್ಟಾರೆ ಕಥೆಯ ಓದು ಖುಷಿಕೊಟ್ಟಿದೆ...ಹಲವು ಕಥೆಗಳ ಹೊಳವಿಗೆ ಕಾರಣವೂ ಆಗಿದೆ...ವಿಜೇತ ಹಾಗೂ ಭಾಗವಹಿಸಿದ ಎಲ್ಲ ಸಾಹಿತ್ಯದ ಸ್ನೇಹಿತರಿಗೆ ಅವಕಾಶಕ್ಕಾಗಿ ಪರಿಷತ್ತಿನ ಬಳಗ ,ಅಧ್ಯಕ್ಷ ಶಂಕರ್ ದೇವರಿಗೆ ಜೊತೆಗೂಡಿ ಒತ್ತಡ ಕಡಿಮೆ ಮಾಡಿದ ಡಾ.ನಿಂಗೂ ಸೊಲಗಿ ಸರ್ ಗೆ ವಂದನೆಗಳು....
- ಗುಂಡುರಾವ್ ದೇಸಾಯಿ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ