* * * *

ಶುಕ್ರವಾರ, ಫೆಬ್ರವರಿ 10, 2023

ಕಲಿಕಾ ಹಬ್ಬ - ಸರಕಾರಿ ಶಾಲಾ ಮಕ್ಕಳ ಸಂಭ್ರಮ

 

ರಾಯಚೂರು ಜಿಲ್ಲೆಯ ಲಿಂಗಸುಗೂರ ತಾಲ್ಲೂಕಿನ ಸರಕಾರಿ ಪ್ರೌಢ ಶಾಲೆ ನೀರಲಕೇರಿಯಲ್ಲಿ ನಡೆದ ಈಚನಾಳ ಕ್ಲಷ್ಟರ್ ಮಟ್ಟದ ಕಲಿಕಾ ಹಬ್ಬದ ಕ್ಷಣಗಳು

👇👇👇👇















ಗುರುವಾರ, ಮೇ 6, 2021

ಮಕ್ಕಳಿಂದ ಕಲಾಕೃತಿ ಹಾಗೂ ಚಿತ್ರಕಲೆ |ಮಕ್ಕಳಿಗಾಗಿ Hme Work

 ೨೦೨೦ ನೇ ವರ್ಷದ ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ರಚಿಸಲಾದ " ಮಕ್ಕಳಿಗಾಗಿ ಹೋಮ್ ವರ್ಕ್ " ವಾಟ್ಸ್ ಆಪ್ ಗುಂಪಿನಲ್ಲಿ ಮಕ್ಕಳಿಂದ ರಚಿತವಾದ ಕಲೆ & ಚಿತ್ರಕಲೆ




 Aditi Muralidhar  14years





ಶನಿವಾರ, ಮೇ 16, 2020

ಅಂತರ್ಜಾಲ ಆಧಾರಿತ ರಾಜ್ಯ ಮಟ್ಟದ ಮಕ್ಕಳ ಕಥೆ ರಚನೆ & ವಾಚನ ಸ್ಪರ್ಧೆ*

👇🏻ಪ್ರಕಟಣೆ👇🏻
~~~~~~~~~
 *ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ), ಬೆಂಗಳೂರು* & *ಕೊಡಗು ಜಿಲ್ಲಾ ಘಟಕದ ಪ್ರಾಯೋಜಕತ್ವದಲ್ಲಿ  ಅಂತರ್ಜಾಲ ಆಧಾರಿತ ರಾಜ್ಯ ಮಟ್ಟದ ಮಕ್ಕಳ ಕಥೆ ರಚನೆ & ವಾಚನ ಸ್ಪರ್ಧೆ*

【ದಿನಾಂಕ: ೨೩/೦೫/೨೦೨೦ ಮತ್ತು ೨೪/೦೫/೨೦೨೦  ರಾತ್ರಿ ೦೮ ರಿಂದ ೧೦ ವರೆಗೆ】

 *ನಿಯಮಗಳು/ಸೂಚನೆಗಳು*
~~~~~~~~~~~~~~~
 *೦೧* .  ಮಕ್ಕಳ ಕಥೆ *೨೫೦* ರಿಂದ *೩೦೦* ಪದಗಳ ಮಿತಿಯಲ್ಲಿಯೇ ಇರಬೇಕು.

 *೦೨* . ಒಬ್ಬರು ಒಂದೇ ಮಕ್ಕಳ ಕಥೆ ಮಾತ್ರ ಕಳಿಸಬೇಕು & ವಾಚಿಸಬೇಕು.

 *೦೩* .ಮಕ್ಕಳ ಕಥೆಯು ಸ್ವಂತ ರಚನೆಯದ್ದಾಗಿರಬೇಕು.

 *೦೪* . ಮಕ್ಕಳ ಕಥೆಯನ್ನು ಕಡ್ಡಾಯವಾಗಿ ಅಕ್ಷರ ದೋಷ ಇಲ್ಲದಂತೆ ಮುದ್ರಿಸಿಯೇ ಕಳಿಸಬೇಕು.

 *೦೫* . ಫೋಟೋ ರೂಪದ ಅಥವಾ ಕಾಗದದಲ್ಲಿ ಬರೆದು
        ಕಳಿಸುವ ಮಕ್ಕಳ ಕಥೆಯನ್ನು ಪರಿಗಣಿಸುವುದಿಲ್ಲ.

 *೦೬* . ಮಕ್ಕಳ ಕಥೆಯನ್ನು ವಾಚಿಸಿದ ಧ್ವನಿಸುರುಳಿಯನ್ನು (ಆಡಿಯೋ) ಮತ್ತು
        ‌ಸ್ವಪರಿಚಯದ ೩೦ ಸೆಕೆಂಡ್ ಗಳ ವಿಡಿಯೋವನ್ನು ಮುಂದಿನ ಸಂಖ್ಯೆಗಳಿಗೆ
        ದಿ/೧೫ ರ ಶುಕ್ರವಾರದ ಸಂಜೆ ೦೫ ಗಂಟೆಯ ಒಳಗೆ ತಲುಪಿಸಬೇಕು.

 *೦೭* . ಪ್ರಥಮ, ದ್ವಿತೀಯ ಮತ್ತು
 ತೃತೀಯ ಸ್ಥಾನವನ್ನು ಪಡೆದ ಮಕ್ಕಳ ಕಥೆಗಳಿಗೆ
        ರೂ.೫೦೧, ರೂ.೪೦೧ & ರೂ.೩೦೧ ನಗದು ಬಹುಮಾನವನ್ನು
        ಆನ್ಲೈನ್ ಮೂಲಕ ನೀಡಲಾಗುವುದು.

 *೦೮* . ತೀರ್ಪುಗಾರರು ನೀಡಿದ ೧೦ ಸಮಾಧಾನಕರ ಮಕ್ಕಳ ಕಥೆಗಳಿಗೆ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಹಾಗೂ ಮೆಚ್ಚುಗೆ ಪಡೆದ ೧೦ ಉತ್ತಮ ಮಕ್ಕಳ ಕಥೆಗಳಿಗೆ ಪ್ರಮಾಣ ಪತ್ರಗಳನ್ನು ವೇದಿಕೆಯ ಕಾರ್ಯಕ್ರಮದಲ್ಲಿ ನೀಡಲಾಗುವುದು.

 *೦೯* . ನಿಯಮಗಳಿಗೆ ಒಳಪಡದ ಮಕ್ಕಳ ಕಥೆಗಳನ್ನು ಬಹುಮಾನಕ್ಕೆ ಕಡ್ಡಾಯವಾಗಿ ಪರಿಗಣಿಸುವುದಿಲ್ಲ.

 *೧೦* . ಪ್ರಕಟಣೆಯ ನಂತರ ಹೆಸರನ್ನು ನೋಂದಾಯಿಸುವ ಪ್ರಕ್ರಿಯೆ ಆರಂಭವಾಗುತ್ತದೆ.

 *೧೧* . ಮೊದಲು ನೋಂದಾಯಿಸಿಕೊಂಡ ೭೫ ಕವಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು.

 *೧೨* . ಭಾಗವಹಿಸುವ ಕವಿಗಳ ಮಕ್ಕಳ ಕಥೆಗಳನ್ನು ವೇದಿಕೆಯು ಪ್ರಕಟಿಸುವ ಸಂಕಲನದಲ್ಲಿ ಬಳಸಿಕೊಳ್ಳಲಾಗುವುದು.

 *೧೩* . ತೀರ್ಪುಗಾರರ ನಿರ್ಣಯವೇ ಅಂತಿಮವಾದುದು.

 *೧೪* . ಮಕ್ಕಳ ಕಥೆಗಳು ಟೈಪ್ ಮಾಡಿದ ಮುದ್ರಿತ ರೂಪ,(ಪಿಡಿಎಫ್ ಅಥವಾ ಫೋಟೋ ಕಥೆಗಳನ್ನು ಪರಿಗಣಿಸಲಾಗುವುದಿಲ್ಲ)  ವಾಚನದ ಆಡಿಯೋ ಮತ್ತು ಸ್ವಪರಿಚಯದ ವಿಡಿಯೋಗಳನ್ನು *ಕಳಿಸಬೇಕಾದ ಸಂಖ್ಯೆಗಳು..*

೧). ೯೧೪೧೩೯೫೪೨೬ *ಗಿರೀಶ್ ಕಿಗ್ಗಾಲು,* ಮಡಿಕೇರಿ ತಾಲ್ಲೂಕು ಗೌರವಾಧ್ಯಕ್ಷರು)

೨). ೭೨೦೪೪೩೨೨೧೨ ( *ಚಂಗಚಂಡ ರಶ್ಮಿ ನಿತಿನ್* ಕಾರ್ಯದರ್ಶಿ ಕೊಡಗು ಜಿಲ್ಲೆ )

೩).  ೯೬೩೨೬೧೫೬೧೩( *ಹರೀಶ್ ಕಿಗ್ಗಾಲು* ,ಖಜಾಂಚಿಗಳು ಕೊಡಗು ಜಿಲ್ಲೆ) .

೪).  ೯೯೦೦೫೯೫೭೬೧( *ಸುದರ್ಶನ್ ಕುಸುಬೂರು*  ಗೌರವ ಕಾರ್ಯದರ್ಶಿ ಕೊಡಗು ಜಿಲ್ಲೆ).

೫). ೯೪೮೧೮೮೩೧೯೪ ( *ಪಿ ಎಸ್‌ ವೈಲೇಶ ಕೊಡಗು* ಕೊಡಗು ಜಿಲ್ಲಾಧ್ಯಕ್ಷರು).

 ೬). ೯೪೪೯೩೧೧೨೯೮
 ( *ವಾಸು ಸಮುದ್ರವಳ್ಳಿ,* ರಾಜ್ಯ ಸಂಚಾಲಕರು),

 ೭). ೯೭೩೯೮೭೮೧೯೭ ( *ಕೊಟ್ರೇಶ್ ಎಸ್. ಉಪ್ಪಾರ್,* ರಾಜ್ಯಾಧ್ಯಕ್ಷರು)

              ವಿಶ್ವಾಸದೊಂದಿಗೆ,
 *ಅಧ್ಯಕ್ಷರು & ಕಾರ್ಯದರ್ಶಿಗಳು ಹಾಗೂ ಸರ್ವ   ಪದಾಧಿಕಾರಿಗಳು* ,
ಕೇಂ.ಕ.ಸಾ.ವೇ. ಕೊಡಗು ಜಿಲ್ಲೆ.

ಶುಕ್ರವಾರ, ಮೇ 15, 2020

ರಾಜ್ಯಮಟ್ಟದ ಕಥೆ ಹೇಳುವ(ಕಥಾಕಥನ) ಸ್ಪರ್ಧೆ 2020 ರ ಫಲಿತಾಂಶ

📱📱🎤🎤💐💐👍👍
*ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ,ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕ ಹಾಗೂ ಸರ್ ಫೌಂಡೇಶನ್ ಸೊಲ್ಲಾಪುರ* ಇವರ ಸಂಯುಕ್ತಾಶ್ರಯದಲ್ಲಿ
*ವಿಶ್ವ ಮಾತೃದಿನದ ಅಂಗವಾಗಿ*
ಆಯೋಜಿಸಿದ
*ಕಿರಿಯರ ಮತ್ತು ಹಿರಿಯರ ವಿಭಾಗದ*
*ರಾಜ್ಯಮಟ್ಟದ ಕಥೆ ಹೇಳುವ(ಕಥಾಕಥನ) ಸ್ಪರ್ಧೆ 2020 ರ ಫಲಿತಾಂಶ*
🎤🎤🎤🎤🎤🎤🎤
🥇🥈🥉🥇🥈🥉🥇

*ಕಿರಿಯರ ವಿಭಾಗ*

ಪ್ರಥಮ ಕ್ರಮಾಂಕ

*ಶ್ರೇಯಾ ನರೇಂದ್ರ ಆಲೆಗಾಂವಿ*
*ಇಲಕಲ್ ಬಾಗಲಕೋಟ ಜಿಲ್ಲೆ*
🥇🥇🥇🥇🥇🥇🥇🥇🥇
ದ್ವಿತೀಯ ಕ್ರಮಾಂಕ
*ಈಶಾಂತ ಎಲ್.ಮೈಸೂರು*
🥈🥈🥈🥈🥈🥈🥈🥈🥈
ತೃತೀಯ ಕ್ರಮಾಂಕ

*ಅನೀಶ್.ಬಿ,*
*ಕೊಪ್ಪ.*
*ಚಿಕ್ಕಮಂಗಳೂರು ಜಿಲ್ಲೆ.*
🥉🥉🥉🥉🥉🥉🥉🥉🥉
ಪ್ರೋತ್ಸಾಹನಪರ ಬಹುಮಾನದ ಕಥೆ

*ಉನ್ನತಿ.ಸಿ*
*ಗುಂಡ್ಲುಪೇಟೆ*
*ಚಾಮರಾಜ ನಗರ*

*ಲಕ್ಷ್ಮೀ. ಸಿದ್ಧರಾಮ ನಾವಿ*
*ನಾಗಣಸೂರ* *ಸೊಲ್ಲಾಪುರ ಜಿಲ್ಲೆ*
🥇🥈🥉🥇🥈🥉🥇🥈🥉
ಉತ್ತಮ "ಮೆಚ್ಚುಗೆ ಕಥೆಗಾರ" ಬಹುಮಾನ

*ಧ್ಯಾನ. ರೈ ಪುತ್ತೂರು*
*ದಕ್ಷಿಣ ಕನ್ನಡ ಜಿಲ್ಲೆ*

*ರಕ್ಷಾ. ಕೆ.*
*ವಾಮಂಜೂರು,* *ಮಂಗಳೂರು,*
*ದಕ್ಷಿಣ ಕನ್ನಡ ಜಿಲ್ಲೆ.*

🥇🥈🥉🥇🥈🥉🥇🥈🥉
   *ಹಿರಿಯರ ವಿಭಾಗ*

 ಪ್ರಥಮ ಕ್ರಮಾಂಕ

*ಪ್ರೇಮಾ ಶಿವಾನಂದ. ಬೆಂಗಳೂರು*
🥇🥇🥇🥇🥇🥇🥇🥇🥇
ದ್ವಿತೀಯ ಕ್ರಮಾಂಕ

*ರವಿ .ಸಿ (ರವಿರಾಜ್ ಕುಮಾರ್ )*
*ಕೋರಮಂಗಲ,*
*ಬೆಂಗಳೂರು*

*ಭಾರತಿ . ಎ ,*
*ಕೊಪ್ಪ ,*
*ಚಿಕ್ಕಮಗಳೂರು ಜಿಲ್ಲೆ*
🥈🥈🥈🥈🥈🥈🥈🥈🥈
ತೃತೀಯ ಕ್ರಮಾಂಕ

*ವೆಂಕಟೇಶ ಚಾಗಿ*
*ಲಿಂಗಸುರು*

*ಸೂರ್ಯನಾರಾಯಣ*
*ಬಂಟವಾಳ*
🥉🥉🥉🥉🥉🥉🥉🥉🥉
 ಪ್ರೋತ್ಸಾಹನಪರ ಬಹುಮಾನದ ಕಥೆ
*ಅಖಿಲಾ ಕೆಯ್ಯೂರು*
*ಪುತ್ತೂರು ತಾಲೂಕು*
*ದಕ್ಷಿಣ ಕನ್ನಡ ಜಿಲ್ಲೆ*

*ಅಶೋಕ ವಿ ಬಳ್ಳಾ ಸೂಳೆಬಾವಿ*
🥇🥈🥉🥇🥈🥉🥇🥈🥉

ಉತ್ತಮ "ಮೆಚ್ಚುಗೆ ಕಥೆಗಾರ " ಬಹುಮಾನ
*ಕೀರ್ತನಾ ನಾಯಕ*
*ಬೆಂಗಳೂರು*

*ಬಿಂದು* *ಚಿಕ್ಕಮಂಗಳೂರು*

*ಕಲಂಧರ ಎಸ್.* *ಯಾದಗಿರಿ*
🥇🥈🥉🥇🥈🥉🥇🥈🥉
ಕಿರಿಯರ ಹಾಗೂ ಹಿರಿಯರ ವಿಭಾಗದಲ್ಲಿ ಪ್ರಥಮ,ದ್ವಿತೀಯ ,ತೃತೀಯ, ಪ್ರೋತ್ಸಾಹನಪರ ಮತ್ತು ಉತ್ತಮ " ಮೆಚ್ಚುಗೆ ಕಥೆಗಾರ" ಬಹುಮಾನ  ಪಡೆದ ಸ್ಪರ್ಧಿಗಳಿಗೆ ಅಭಿನಂದನೆಗಳು..
🌹🌷🌹🌷🌹🌷🌹🌷🌹

 ಜೊತೆಗೆ ಈ ಸ್ಪರ್ಧೆಯಲ್ಲಿ ಸಹಭಾಗ ತೆಗೆದುಕೊಂಡ ಎಲ್ಲರಿಗೂ ಅಭಿನಂದನೆಗಳು ಮತ್ತು ಶುಭಾಶಯಗಳು.
🙏🌹🙏🌹🙏🌹🙏🌹🙏

   ಲಾಕ್ ಡಾವುನ್ ಮುಗಿದ ತಕ್ಷಣ ಒಂದು ಸಮಾರಂಭದಲ್ಲಿ  ಸನ್ಮಾನ ಚಿಹ್ನೆ,ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡಿ ಗೌರವಿಸಲಾಗುವದು.
ಹಾಗೂ ಸಹಭಾಗಿಯಾದ ಸರ್ವರಿಗೂ ಆನಲಾಯಿನ್ ಸಹಭಾಗ ಪ್ರಮಾಣಪತ್ರ ಕಳಿಸಲಾಗುವದು.
💐💐💐👍👍💐💐
*ಶುಭಕೋರುವವರು*
👍👍👍👍👍👍👍
*ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ-ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕ ಹಾಗೂ ಸರ್ ಫೌಂಡೇಶನ್ ಸೊಲ್ಲಾಪುರ*
📲📱📱🎤🎤📱📲

ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಮಟ್ಟದ ಕಥನ ಕವನ ಸ್ಪರ್ಧೆಯ ಹಿರಿಯರ ವಿಭಾಗದ *ಮಕ್ಕಳ ಕಥನ ಕವನಗಳ ಸ್ಪಧೆಯ ಫಲಿತಾಂಶ

*ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಮಟ್ಟದ ಕಥನ ಕವನ ಸ್ಪರ್ಧೆಯ ಹಿರಿಯರ ವಿಭಾಗದ *ಮಕ್ಕಳ  ಕಥನ ಕವನಗಳ ಸ್ಪಧೆಯ  ಫಲಿತಾಂಶದ* ವಿವರಗಳು

🥇🥇 *ಪ್ರಥಮ*  1."ವಿಸ್ಮಯದೂರು"  ----ಅಶೋಕ ವಿ ಬಳ್ಳಾ

🥈🥈 *ದ್ವಿತಿಯ* : 2" ವಲಸೆ ಬಂದ ಹಕ್ಕಿ" --- ಸೋಮಲಿಂಗ ಬೇಡರ

🥉🥉 *ತೃತಿಯ* : 3. "ಕಳ್ಳರು ಮತ್ತು ತೆನಾಲಿರಾಮ"---- ಬಾಪು ಗ ಖಾಡೆ.

*ಸಮಾಧಾನಕರ*🏅🏅:
1 " ಮರಿಚೇಳಪ್ಪನ ಮದುವೆ" --- ಅರುಣಾ ನರೇಂದ್ರ

2. "ಕಾಡಲಿ ನಡೆಯಿತು ದಸರ!" --- ಪ್ರಕಾಶ ಮನ್ನಂಗಿ.

3." ಗೊಂಬೆ ತಂದ ಭಾಗ್ಯ"--- ಪ್ರೇಮಾ ಶಿವಾನಂದ


*ರಾಜ್ಯಮಟ್ಟದ ಕಥನ ಕವನ ಸ್ಪರ್ಧೆಯ ತೀರ್ಪುಗಾರರು ಸ್ಪರ್ಧೆಯ ಕುರಿತಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ತಮ್ಮ ಪ್ರೀತಿಯ ಓದಿಗಾಗಿ* 

=> ಕಥನಕವನ ರಚನಾ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಹಿರಿಯ, ಕಿರಿಯ ಸಾಹಿತಿಗಳಿಗೆ ವಂದನೆಗಳು.ಮಕ್ಕಳ ಸಾಹಿತ್ಯದಲ್ಲಿ ಕಥನಕವನ ಪ್ರಾಕಾರದ ಬರಹ ಬಲು ವಿಶಿಷ್ಟವಾದುದು. ಕಾವ್ಯದಲ್ಲಿ ಕಥೆ ಅರಳಿಸುವ ಕಲೆ ಬಲು ಸೊಗಸು. ಸ್ಪರ್ಧೆಗೆ ಬಂದ ಎಲ್ಲಾ ಕಥನಕವನಗಳು ಉತ್ತಮವಾಗಿದ್ದವು. ಅವುಗಳಲ್ಲಿ  ಅತ್ಯುತ್ತವಾದ ಕೆಲವುಗಳನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಹೀಗಾಗಿ ಎಲ್ಲಾ ಕಥನಕವನಗಳು ಮೆಚ್ಚುಗೆಯಾಗಿವೆ. ವಿರಳ ಸಂಖ್ಯೆಯಲ್ಲಿ ಬಂದ ಕಿರಿಯರ ವಿಭಾಗದ ಕಥನಕವನಗಳಲ್ಲಿ ಒಂದೆರಡು ಕವನಗಳಲ್ಲಿ ಪಾಲಕರ ಮಾರ್ಗದರ್ಶನ ತುಸು ಹೆಚ್ಚೆ ಅನ್ನಿಸುವಷ್ಟು ಇತ್ತು. ಮಕ್ಕಳ ಪ್ರತಿಭೆ ಸ್ವಯಂ ಕಸುವಿನಲ್ಲಿ ಬೆಳೆಯಬೇಕು. ಒಂದಿಷ್ಟು ಆಧಾರ ಇರಲಿ ಅಷ್ಟೇ ಎನ್ನುವುದು ನಮ್ಮಕಳಕಳಿ. ಮಕ್ಕಳಿಗೆ ಹೊಸತನದ  ಸಾಹಿತ್ಯದ ಕೃತಿಗಳು ಓದಲು ದಕ್ಕಬೇಕು. ಅಂದಾಗ ಇನ್ನಷ್ಟು ಪಕ್ವಯುತ ಬರಹ ಆಗುತ್ತದೆ. ಅದಕ್ಕೆ ಪಾಲಕರು ಆಸರೆಯಾಗಲಿ. ಹಾಗೆಯೇ ಮಕ್ಕಳ ಒತ್ತಾಯವೂ ಇರಲಿ. ಇನ್ನೂ ಹಿರಿಯರ ವಿಭಾಗದಲ್ಲಿ ನಿರೀಕ್ಷೆ ಮೀರಿ ಕಥನಕವನಗಳು ಬಂದಿದ್ದರಿಂದ ತುಸು ಹೆಚ್ಚೆ ಸಮಯ ಓದಿಗೆ ತೆಗೆದುಕೊಂಡು ಗಮನಹರಿಸಬೇಕಾಯಿತು. ಮಕ್ಕಳ ಸಾಹಿತ್ಯ ವಿಫುಲವಾಗಿ ಬೆಳೆಯುತ್ತಿದೆ. ಅದಕ್ಕೆ ಬಡತನವಿಲ್ಲ ಎಂಬ ಮಾತಿಗೆ ಈ ಪೈಪೋಟಿ ಸೂಕ್ತ ಉದಾಹರಣೆ. ಆದರೆ ಅವುಗಳ ಪೋಷಣೆಗೆ ವೇದಿಕೆಗಳು ಬೇಕು. ಈ ನಿಟ್ಟಿನಲ್ಲಿ ಶಂಕರದೇವರು ಹಿರೇಮಠ ಅವರ ಕಾಳಜಿ ನೆನೆಯಲೇಬೇಕು. ಅವರಿಗೂ ಅಭಿನಂದನೆಗಳು. ಒಂದಿಷ್ಟು ತಾಜಾತನದ ವಿಷಯ ವೈವಿಧ್ಯತೆಯ ಕಥನಕವನಗಳು ಮೂಡಿಬಂದಿವೆ. ತುಂಬಾ ಖುಶಿ. ಬಹುತೇಕರು ಪ್ರಾಣಿ ಪಕ್ಷಿಗಳ ಕಥೆಗಳ ಆಯ್ಕೆಮಾಡಿಕೊಂಡಿದ್ದಾರೆ. ಒಂದಿಷ್ಟು ಹೊಸತನ ಇದ್ದರೆ ಚೆನ್ನ. ಕಥನಕವನಗಳು ಯಾವಾಗಲೂ ಸುಖಾಂತ ಕಾಣಬೇಕು. ದುಃಖಾಂತ ಒಳಿತಲ್ಲ. ಸಾಹಿತ್ಯ ಮಕ್ಕಳಿಗೆ ಖುಶಿ, ರಂಜನೆ, ನೀತಿ, ಜ್ಞಾನ ನೀಡುವಂತಿದ್ದರೆ ಬಲು ಸೊಗಸು. ಈ ನಿಟ್ಟಿನಲ್ಲಿ ಹೊಸ ಕೃತಿಗಳ ಅಧ್ಯಯನ, ತಮ್ಮ ಬರಹಗಳನ್ನು ಇತರ ಬರಹಗಾರೊಂದಿಗೆ ಹೊಲಿಸಿಕೊಳ್ಳುವುದರ ಮೂಲಕವೂ ಒಂದಿಷ್ಟು ನಾವಿನ್ಯತೆಯನ್ನು ಮೂಡಿಸಿಕೊಳ್ಳಬಹುದು. ಎಲ್ಲ ಕಥನಕವನಗಳು ಸುಂದರವಾಗಿ ಮೂಡಿಬಂದಿವೆ.  ಕಥನಕವನದ ವಿಶಿಷ್ಠ ಸ್ವರೂಪಗಳನ್ನು ಅಳವಡಿಸಿಕೊಂಡ ಕೆಲವುಗಳನ್ನು ಪ್ರಶಸ್ತಿಗೆ ಆರಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯ ಈ ಮುಖೇನ ಹಲವಾರು ಬಗೆಯ ಕಥನ ಕವನಗಳನ್ನು ಓದಿ ಆನಂದಿಸುವ ಅವಕಾಶ ಎಲ್ಲರಿಗೂ ಒಟ್ಟಿಗೆ ನಿಲುಕಿದೆ. ಅದೇ ಸಂತಸವನ್ನು ಮತ್ತೊಮ್ಮೆ ನಾವು ಮತ್ತೆ ಮತ್ತೆ ಓದಿ ಅನಂದಿಸಿದ್ದು ಇದೆ. .ಸ್ಪರ್ಧಾಮನೋಭಾವನೆಯಿಂದ ಭಾಗವಹಿಸಿದ ಮತ್ತೊಮ್ಮೆ ನನ್ನೆಲ್ಲಾ ಸಾಹಿತ್ಯ ಮಿತ್ರರನ್ನು ಅಭಿನಂದಸಿಸುತ್ತಾ. ಮಕ್ಕಳ ಸಾಹಿತ್ಯದ ಬೆಳವಣಿಗೆಗಾಗಿ ಇನ್ನಷ್ಟು ಕಾತುರತೆ ಬೆಳೆಸಿಕೊಳ್ಳೋಣ, ವೇದಿಕೆಯನ್ನು ಬಳಸಿಕೊಳ್ಳೋಣ. ಎಲ್ಲರಿಗೂ ಶುಭವಾಗಲಿ.   
              *ಶ್ರೀಪ.ಗು. ಸಿದ್ದಾಪೂರ*.   ಹಾಗೂ  *ವೈ,ಜಿ,ಭಗವತಿ*.

ಬುಧವಾರ, ಮೇ 13, 2020

ಮಕ್ಕಳ ಕಥಾ ಸ್ಪರ್ಧೆ ಕುರಿತು ತೀರ್ಪುಗಾರರಾದ ಅನಿಸಿಕೆ

ಆತ್ಮಿಯರೆ,
ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ರಾಯಚೂರು ಎಪ್ರಿಲ್  ೨೬ -೨೦೨೦ ರಂದು ಹಮ್ಮಿಕೊಂಡಿದ್ದ  ಹಿರಿಯ ಹಾಗೂ ಕಿರಿಯ ವಿಭಾಗದ ಮಕ್ಕಳ ಕಥಾ ರಚನಾ ಸ್ಪರ್ಧೆಯಲ್ಲಿ  ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂಬ ಆಪೇಕ್ಷೆ ಹೊಂದಿದವನಾಗಿದ್ದರೂ ಶಂಕರ್ ದೇವರು ಅವರ ಪ್ರೀತಿಯ ಒತ್ತಾಸೆಯ ಮೇರೆಗೆ  ಖೊ ಕೊಟ್ಟ ಡಾ.ಶಶಿಕಾಂತ ಗುರುಗಳ ಆಗ್ರಹದ ಮೇರೆಗೆ  ಹಲವು ಕಥೆಗಳನ್ನು ಓದುವುದರ ಮೂಲಕ ನನ್ನ ಬರವಣಿಗೆಯನ್ನು ಸುಧಾರಿಸಿಕೊಳ್ಳಬಹುದೆಂಬ ನಿಟ್ಟಿನಲ್ಲಿ ಒಪ್ಪಿಕೊಂಡೆ, ಜೊತೆಗೆ ಆತ್ಮೀಯರಾದ ಹಿರಿಯ ಮಕ್ಕಳ ಸಾಹಿತಿಗಳಾದ ಡಾ.ನಿಂಗೂ ಸೊಲಗಿಯವರು  ಈ ಸ್ಪರ್ಧೆಗೆ ಜೊತೆಯಾದರು.
ಆರಂಭದ ನಿರೀಕ್ಷೆ ಕಥೆಗಳು ಕಡಿಮೆ ಬರಬಹುದೆಂದು. ಆದರೆ ರಾಯಚೂರು ಘಟಕದ ಕ್ರಿಯಾಶೀಲತೆಗೆ ನಾಡಿನ ಎಲ್ಲಡೆಯಿಂದ ಅಲ್ಲದೆ ಹೊರ ರಾಜ್ಯದಿಂದಲೂ ಬಂದ ಕಥೆಗಳೆ ನಿದರ್ಶನ. ಹಿರಿಯರ ವಿಭಾಗದ 58 ಕಥೆಗಳು ಕಿರಿಯರ ವಿಭಾಗದ 21ಕಥೆಗಳು  ಕುತೂಹಲ ಮೂಡಿಸಿದವು.
ಸ್ಪರ್ಧೆ ಗಿಂತ ಭಾಗವಹಿಸುವಿಕೆ ಮುಖ್ಯ. ಮಕ್ಕಳ ಸಾಹಿತ್ಯ ರಚನೆ ಹಿನ್ನಡೆ ಅನುಭವಿಸುತ್ತಿರುವ,ಅಲಕ್ಷಕ್ಕೆ ಒಳಗಾಗುತ್ತಿರುವ ಈ ದಿನಗಳಲ್ಲಿ ಇಷ್ಟೆಲ್ಲ ಸಾಹಿತ್ಯದ ಒಡನಾಡಿಗಳು  ಭಾಗವಹಿಸಿದ್ದನ್ನು ನೋಡಿದರೆ ಎಲ್ಲರೂ ವಿಜೇತರಾದಂತೆಯೆ. ತೀರ್ಪು ಒಂದು ಔಪಚಾರಿಕ ಪ್ರಕ್ರಿಯೆ ಎಂದು ಭಾವಿಸಿರುವೆ. ಹಲವರು ಇದರಲ್ಲಿ ಮೊದಲ ಪ್ರಯತ್ನ ಮಾಡಿದ್ದಾರೆ, ಕೆಲವರು ಕಥೆಯ ನಿರೂಪಣೆಯಲ್ಲಿ,ವಸ್ತು ಆಯ್ಕೆಯಲ್ಲಿ ,ಶೈಲಿಯಲ್ಲಿ  ಹಿಡಿತ ಸಾಧಿಸುವಲ್ಲಿ  ಹಿನ್ನಡೆ ಅನುಭವಿಸಿರಬಹುದು ಆದರೆ ಈ ಸ್ಪರ್ಧೆ ಅವರ ಮುಂದಿನ ಬೆಳವಣಿಗೆಗೆ ನೆರವಾಗವುದು ಎಂದು ಭಾವಿಸಿರುವೆ.

ಕಥೆಗಳು ನೀತಿ ಹೇಳಬಾರದು ಈ ವಿಷಯದಲ್ಲಿ ಮಕ್ಕಳ ಸಾಹಿತ್ಯ ಪ್ರವೇಶಿಸುವ ಆರಂಭಿಕರು, ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಜಾಗತಿಕ ಮಕ್ಕಳ ಸಾಹಿತ್ಯದ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ನಾವು ಕನ್ನಡದಲ್ಲಿ ಪ್ರಯೋಗಿಸಬೇಕಿದೆ. ನಮಗೆ ಓದಲು ವಿಫಲವಾಗಿ ಸಿಗುತ್ತಿದ್ದ ಅಮರಚಿತ್ರಕಥೆಗಳು,ಚಂದಮಾಮ ಈಗಿನ ಮಕ್ಕಳಿಗೆ ಸಿಗುತ್ತಿಲ್ಲ. ಮಾಧ್ಯಮದ ಆಕರ್ಷಣೆಗೆ ಸಿಲುಕಿ ಸೊರಗುತ್ತಿರುವ ನಮ್ಮ ಮಕ್ಕಳಿಗೆ ಫ್ಯಾಂಟಸಿ,ವೈಜ್ಞಾನಿಕ, ವಾಸ್ತವ ಕಥೆಗಳನ್ನ ಬರೆಯುವುದರ ಮೂಲಕ ಅವರಲ್ಲಿ ಸಾಹಿತ್ಯದ ರುಚಿ ಹಚ್ಚಬೇಕಿದೆ. ಆಂಗ್ಲಭಾಷಾ ಕಲಿಕೆಯ ಮಕ್ಕಳು ಪಠ್ಯದ ಜೊತೆಗೆ ಆಂಗ್ಲಭಾಷಾ ಮಕ್ಕಳ ಕಥೆ ಹೆಚ್ಚು ಗ್ರಹಿಸುತ್ತಿರುವಂತೆ ನಮ್ಮ ಮಕ್ಕಳು ಯಾವ ಒತ್ತಡವಿಲ್ಲದೆ ಓದುವಂತೆ ಮಾಡಬೇಕಾದರೆ ಮಕ್ಕಳ ಸಾಹಿತ್ಯದಲ್ಲೂ ಪ್ರಯೋಗಕ್ಕಿಳಿಯಬೇಕಾಗಿದೆ. ಆ ಪ್ರಯತ್ನ ನಾವೆಲ್ಲ ಸೇರಿ ಮಾಡೋಣ..
 ಡಾ.ನಿಂಗು ಸೊಲಗಿ ಹಾಗೂ ನಾನು ಸೇರಿ  ಕಥೆಗಳನ್ನು ಆಯ್ಕೆ ಮಾಡುವಲ್ಲಿ ಸಮಸ್ಯೆ ಎದುರಿಸಿದ್ದಂತು ಖಂಡಿತ. ವೈವಿದ್ಯಮಯ ವಿಷಯ ವಸ್ತು,ಶೈಲಿಯ,ವಿಭಿನ್ನ ಯೋಚನೆಯ ಕಥೆಗಳನ್ನು ಓದಿದ ಸಾರ್ಥಕಭಾವ  ನಮ್ಮಲ್ಲಿದೆ.  ಆಧುನಿಕ ಮಕ್ಕಳ ಸಾಹಿತ್ಯದ  ಬೆಳವಣಿಗೆಯನ್ನಾಧರಿಸಿ ಪ್ರಾಮಾಣಿಕವಾಗಿ  ಕಥೆಗಳನ್ನು ಆಯ್ಕೆ ಮಾಡುವ ಪ್ರಯತ್ನ ಮಾಡಿದ್ದೇವೆ...ನಮ್ಮದು ಸಾಧ್ಯತೆ ಇತ್ತು ಕೆಲವರಿಗೆ ಅನಿಸಿರಲೂಬಹುದು.. ಇದೆ ಅಂತಿಮವಲ್ಲ ...ನಮ್ಮ ನಿರ್ಣಯವೆ ಕೊನೆ ಅಲ್ಲ.. ಇದನ್ನು ಮೆಟ್ಟಿಲಾಗಿ ಸ್ವೀಕರಿಸಿ ಮುನ್ನಡೆಯಲು ಯತ್ನಿಸೋಣ.

ಶಂಕರ ದೇವರು ಹಾಗೂ ಅವರ ಬಳಗದಲ್ಲಿ ವಿನಂತಿ ಕೋರಾನಾ ಆಟದ ನಂತರ ಮಕ್ಕಳ ಸಾಹಿತ್ಯದ ಕುರಿತಾದ ಎರಡು ದಿನಗಳ ಕಮ್ಮಟ ನಡೆಸೋಣ.ನಾಡಿನ ಹಿರಿಯರು ನಮ್ಮ ಹಾಗೂ ನಮ್ಮ ಕಾರ್ಯದೊಂದಿಗೆ ಜೊತೆಗೆ ಇದ್ದಾರೆ. ಅವರ ಅನುಭವ ಬಳಸಿಕೊಂಡು ಇನ್ನೂ ಹೊಸತಾಗಿ ಬರೆಯಲು ಯತ್ನಿಸೋಣ.
ಈ ದಿಸೆಯಲ್ಲಿ ಚಿಂತಿಸಿ..

ಕಿರಿಯರ ವಿಭಾಗದ ಸ್ಪರ್ಧೆಯು ಚೆನ್ನಾಗಿತ್ತು..ಮಕ್ಕಳ ವಿಭಿನ್ನ ಅಭಿರುಚಿ ಖುಷಿಕೊಟ್ಟಿತು. ನಮ್ಮ ಮುಂದಿನ ಬರವಣಿಗೆಯಲ್ಲಿ ಅವರನ್ನು ತಲುಪಲು ನಾವು ಬದಲಾಗಬೇಕೆಂಬ ಸೂಚ್ಯವನ್ನು ನೀಡಿದಂತಿತ್ತು.

ಒಟ್ಟಾರೆ ಕಥೆಯ ಓದು ಖುಷಿಕೊಟ್ಟಿದೆ...ಹಲವು ಕಥೆಗಳ ಹೊಳವಿಗೆ ಕಾರಣವೂ ಆಗಿದೆ...ವಿಜೇತ ಹಾಗೂ ಭಾಗವಹಿಸಿದ ಎಲ್ಲ ಸಾಹಿತ್ಯದ ಸ್ನೇಹಿತರಿಗೆ ಅವಕಾಶಕ್ಕಾಗಿ ಪರಿಷತ್ತಿನ ಬಳಗ ,ಅಧ್ಯಕ್ಷ ಶಂಕರ್ ದೇವರಿಗೆ ಜೊತೆಗೂಡಿ ಒತ್ತಡ ಕಡಿಮೆ ಮಾಡಿದ ಡಾ.ನಿಂಗೂ ಸೊಲಗಿ ಸರ್ ಗೆ ವಂದನೆಗಳು....

- ಗುಂಡುರಾವ್ ದೇಸಾಯಿ

ರಾಜ್ಯಮಟ್ಟದ ಕಥೆ ಹೇಳುವ(ಕಥಾಕಥನ) ಸ್ಪರ್ಧೆ 2020

📱📱🎤🎤💐💐👍👍
*ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ-ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕ ಹಾಗೂ ಸರ್ ಫೌಂಡೇಶನ್ ಸೊಲ್ಲಾಪುರ*
*ವಿಶ್ವ ಮಾತೃದಿನದ ಅಂಗವಾಗಿ*
ಆಯೋಜಿಸಿರುವ
*ಕಿರಿಯರ ಮತ್ತು ಹಿರಿಯರ ವಿಭಾಗದ*
*ರಾಜ್ಯಮಟ್ಟದ ಕಥೆ ಹೇಳುವ(ಕಥಾಕಥನ) ಸ್ಪರ್ಧೆ 2020*
🎤🎤🎤🎤🎤🎤🎤🎤
*ಸ್ಪರ್ಧೆಯ ದಿನಾಂಕ-10.05.2020 ರಿಂದ 14.05.2020 ಸಾಯಂಕಾಲ 8.00 ಘಂಟೆಯ ವರೆಗೆ*
📱📱📱📱📱📱📱
🎤🎤🎤🎤🎤🎤🎤
*ಸ್ಪರ್ಧೆಯ ನಿಯಮಗಳು*
📲📲📲📲📲📲📲

*ಕಿರಿಯರ ವಿಭಾಗ*
*1 ರಿಂದ 12 ನೇ*

*ಹಿರಿಯರ ವಿಭಾಗ*
*18 ವರ್ಷ ಮೇಲಿನ ಎಲ್ಲ ವಿದ್ಯಾರ್ಥಿಗಳು,ಶಿಕ್ಷಕರು,ಸಾಹಿತಿಗಳು*
🥇🥈🥉🥇🥈🥉🥇🥈🥉
ಕಿರಿಯರ ಹಾಗೂ ಹಿರಿಯರ ವಿಭಾಗದಲ್ಲಿ ಪ್ರತ್ಯೇಕವಾಗಿ ಪ್ರಥಮ,ದ್ವಿತೀಯ ಹಾಗೂ ತೃತೀಯ ಮತ್ತು ಉತ್ತೇಜನಾರ್ಥ ಕ್ರಮಾಂಕಗಳನ್ನು ತೆಗೆಯಲಾಗುವದು.
🎤📱🎤📱🎤📱🎤📱🎤

ಕೆಳಗಿನ ನೀಲಿ ಬಣ್ಣದ ಲಿಂಕ ಕ್ಲಿಕ್ ಮಾಡಿರಿ.ಅದರಲ್ಲಿ ನಿಮ್ಮ ಹೆಸರು,ವಿಳಾಸ ಹಾಗೂ ವಿವರ ತುಂಬಿ
ಸಬಮಿಟ್ ಮಾಡಬೇಕು.

https://forms.gle/AAhmB55wJvsgityk8

🖨️🖨️🖨️🖨️🖨️🖨️🖨️🖨️

ನೀತಿ ಕಥೆ,ಸಾಹಸ ಕಥೆ,ಸ್ಫೂರ್ತಿ ಕಥೆ,ಐತಿಹಾಸಿಕ ಕಥೆ,ರಾಮಾಯಣ-ಮಹಾಭಾರತದ ಕಥೆ, ಸಾಮಾಜಿಕ ಅರಿವು ಮೂಡಿಸುವ ಕಥೆ,ಅನುಭವದ ಕಥೆ,ಪ್ರಾಚೀನ ಪರಂಪರೆಯ ಕಥೆಗಳ ಪೈಕಿ ಯಾವದಾದರು ಒಂದು ಕಥೆಯನ್ನು ಆಯ್ಕೆ ಮಾಡಿಕೊಂಡು ಒಂದು ಕಥೆಯನ್ನು ಆಡಿಯೋ ಅಥವಾ ವ್ಹಿಡಿಯೋ ರೆಕಾರ್ಡಿಂಗ್  ಮಾಡಿ 14.05.2020 ರ ರಾತ್ರಿ 8.00 ಘಂಟೆಯ ವರೆಗೆ
*9921085319*
ಈ ವಾಟ್ಸಾಪ್ ನಂಬರಿಗೆ ಕಳಿಸಬೇಕು.
📽️📱📽️📱📽️📱📽️📱
ಒಬ್ಬರು ಒಂದೇ  ಕಥೆಯನ್ನು ಮಾತ್ರ ಕಳಿಸಬೇಕು.

ಕಥೆಯ ಪ್ರಾರಂಭ ಮಾಡುವಾಗ ನಿಮ್ಮ ಹೆಸರು,ಗ್ರಾಮ,ತಾಲೂಕು,ಜಿಲ್ಲೆ ರಾಜ್ಯದ ಹೆಸರು ಹೇಳಿ ಕಥೆ ಪ್ರಾರಂಭಿಸಬೇಕು.

14.5.2020 ರ ರಾತ್ರಿ 8.00 ಘಂಟೆಯ ಒಳಗೆ ಬಂದ ಕಥೆಗಳನ್ನು ಮಾತ್ರ ಸ್ಪರ್ಧೆಗೆ ತೆಗೆದುಕೊಳ್ಳಲಾಗುವದು.

ತೀರ್ಪುಗಾರರು ತೆಗೆದುಕೊಂಡ ನಿರ್ಣಯವೇ ಅಂತಿಮ ತೀರ್ಪು...

*ವೇಳೆಯ ಬಂಧನ ಇರುವದಿಲ್ಲ*

🙏🙏🙏🙏🙏🙏🙏

ಫಲಿತಾಂಶ 15.05.2020 ರಂದು ರಾತ್ರಿ 8.00 ಘಂಟೆಗೆ ಪ್ರಕಟಿಸಲಾಗುವದು.

ಕಿರಿಯರ ಹಾಗೂ ಹಿರಿಯರ ವಿಭಾಗದಲ್ಲಿ ಪ್ರಥಮ,ದ್ವಿತೀಯ ,ತೃತೀಯ ಹಾಗೂ ಉತ್ತೇಜನಾರ್ಥ ಕ್ರಮಾಂಕ ಪಡೆದವರಿಗೆ ಲಾಕ್ ಡಾವುನ್ ಮುಗಿದ ತಕ್ಷಣ ಒಂದು ಸಮಾರಂಭದಲ್ಲಿ ಸನ್ಮಾನ ಪೂರ್ವಕವಾಗಿ ಸನ್ಮಾನ ಚಿಹ್ನೆ,ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವದು.
💐💐💐👍👍💐💐💐

*ಮನೆಯಲ್ಲಿಯೇ ಇರಿ,,,ಮೊಬೈಲ್ನಲ್ಲಿ ಕಥೆಯನ್ನು ಹೇಳಿ  ಬಹುಮಾನ ಗೆಲ್ಲಿರಿ...*
💐💐💐💐💐💐💐💐
*ಶುಭಕೋರುವವರು*
👍👍👍👍👍👍👍👍
*ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ-ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕ ಹಾಗೂ ಸರ್ ಫೌಂಡೇಶನ್ ಸೊಲ್ಲಾಪುರ*
📲📱📱🎤🎤📱📲

ಮಕ್ಕಳು ಹಾಗೂ ಸಾಹಿತಿಗಳಿಗಾಗಿ ವಚನ ಸ್ಪರ್ಧೆ

(
ಕಿರಿಯರ ವಿಭಾಗಕ್ಕೆ 250ರಿಂದ 300 ಪದಗಳು /ಹಿರಿಯರ ಭಾಗ 300ರಿಂದ 350 ಪದಗಳು )

ಆತ್ಮೀಯ ಸಾಹಿತಿಗಳಿಗೆ ನಮಸ್ಕಾರಗಳು
 ಸ್ಪಧೆ೯ಯಲ್ಲಿ ಭಾಗವಹಿಸುವ ಸ್ಪಧಾ೯ಮನೋಭಾವ ವನ್ನೂ ವಿಧ್ಯಾ ಥಿ೯ಗಳಲ್ಲಿ  ಬೆಳೆಸುವ ಕೆಲಸವನ್ನೂ ಪಾಲಕರು ಮಾಡಬೇಕು,ವಿಧ್ಯಾಥಿ೯ಗಳು ಸಾಹಿತ್ಯದ ಲೇಖನ,ಬರಹಗಳ ಕೃತಿಗಳನ್ನೂ ಅಧ್ಯಯನ ಮಾಡಲು ಪಾಲಕರು ಮಾಗ೯ದಶ೯ನ ಮಾಡಬೇಕು . ಮಕ್ಕಳ ಬರವಣಿಗೆಯಲ್ಲಿ ಪಾಲಕರ ಮಾಗ೯ದಶ೯ನ ಇರಬೇಕೇ ಹೊರತು ಹಸ್ತ ಕ್ಷೇಪ ವಲ್ಲ. ಮಕ್ಕಳ ಬರವಣಿಗೆಗೆ ಪ್ರೋತ್ಸಾಹ ನೀಡಿ. ಧನ್ಯವಾದಗಳು🙏🙏

=> ಶಂಕರ್ ದೇವರು
ರಾಯಚೂರು